ಸೃಜನ್ ಲೋಕೇಶ್ (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ ಲೋಕೇಶ್ ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಅವರು ದೂರದರ್ಶನದ ನಟಿ. ಅವರ ಅಜ್ಜ ಸುಬ್ಬಯ್ಯ ನಾಯ್ಡು ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. == ಕುಟುಂಬ == ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂಗಿ ಪೂಜಾ ಲೋಕೇಶ್ ಕನ್ನಡ ಹಾಗು ತಮಿಳಿನ ಕಲಾವಿದೆ. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ . == ನಟನಾವೃತ್ತಿ == ಸೃಜನ್ ಲೋಕೇಶ್ ಆರಂಭದಲ್ಲಿ ನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನ ಕಾರ್ಯಕ್ರಮ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಪ್ರಸಿದ್ದಿ ಪಡೆಯಿತು. === ಬಾಲ ನಟನಾಗಿ === ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು. ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು. === ಪಾತ್ರಗಳಲ್ಲಿ === ಸೃಜನ್ ಅವರು ರಾಧಿಕಾ ಕುಮಾರಸ್ವಾಮಿ ಜೊರೆ ನಟಿಸಿದ ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರು ನಟನಾಗಿ ಯಶಸ್ಸನ್ನು ಕಾಣಲಿಲ್ಲ. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು . == ನಿರ್ಮಾಣ == ೨೦೧೩ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ನಿಭಾಯಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ . == ಪ್ರಶಸ್ತಿಗಳು ಮತ್ತು ಗೌರವಗಳು == *೨೦೧೧ರಲ್ಲಿ ಸುವರ್ಣ ಚಾನೆಲ್ ಅವರು ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ನೀಡಿದ್ದಾರೆ . *೨೦೧೧ರಲ್ಲಿ ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್ ನಲ್ಲಿ ಅತ್ಯಂತ ಜನಪ್ರಿಯ ವರ್ಗದಲ್ಲಿ ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ಲಭಿಸಿದೆ. *೨೦೧೨ & ೨೦೧೩ರ ಮಾಧ್ಯಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ. == ಚಲನಚಿತ್ರಗಳ ಪಟ್ಟಿ == == ಟಿವಿ ಕಾರ್ಯಕ್ರಮಗಳ ಪಟ್ಟಿ == == ಉಲ್ಲೇಖಗಳು ==